Monday 24 May 2021

sanje sobagu


 

 

 

ಜೈ ಸಂತೋಷೀ ಮಾ

ಜೈ ಸಾಯಿರಾಮ್

ಆಕಾಶದ ಅಂಚಿನಲಿ ರಂಗಿನಾಟ ನಡೆದೈತೋ

ಕೆರೆ ಕೊಳ್ಳ ಹಳ್ಳಗಳು ತುಂಬಿ ಹರಿದೈತೋ

ಚೆಲುವು ಭುವಿಗಿಳಿದೈತೋ ಮೋಡಿ  ಮಾಡೈತೋ

 

ನಮ್ಮೂರ ಕೆರೆಯಾಗೆ ಸಂಜೀವ ಜಾವ್ದಾಗೆ

ಓಕುಳಿಯಾಡುತ ಬಂದೌನೆ  (ಸೂರ್ಯಪ್ಪ)

ರಂಗು ರಂಗೋಲೆ ಬರೆದೌನೆ

 

ಅರಿಷಿಣ ಕುಂಕುಮ ಮೈ ತುಂಬಾ ಇಟ್ಕೊಂಡು

ಸಿಂಗಾರವಾಗೌಳೆ ಗಂಗವ್ವ (ಗರತಿ ಗಂಗವ್ವ)

ಹಿಗ್ಯಾಗಿ ಹರಿದೌಳೆ ಬಯಲಾಗೆ

 

ನದಿಯಾಗೆ ಇಳಿದಿರುವ ಸೂರ್ಯಂಗೆ ಬೆಳಗೌಳೆ

ಕೆಂಪಿನದೋಕುಳಿ ಅರತಿಯಾ (ಬೆಳಗೌಳೆ)

ಜಯವಂತನಾಗಿ ಬಾಳೆಂದು

 

ಗಂಗಮ್ಮನ ಉಡಿಯಾಗೆ ಆಡಿರುವ ಮರಿಮೀನು

ಮೇಲೆದ್ದು ಪುಟಿಪುಟಿದು ನೆಗೆದಾವೆ (ಮರಿ ಮೀನು)

ಅಪ್ಪ ಜಗದೊಡೆಯನ ಕಳುಹಾಲು

 

 

 

Sunday 23 May 2021

ಗುರು ವಂದನೆ

ಜೈ ಸಂತೋಷೀ ಮಾತಾ

ಜೈ ಸಾಯಿ ರಾಮ್

ಸ್ವೀಕರಿಸಿ ನಮನವನು ಓ ವಿಶ್ವ ವಂದ್ಯ
ಜಗವೆಲ್ಲ ಮಣಿಯುತಿದೆ ನಿಮಗೆ ಆಚಾರ್ಯ 

ಮುಗ್ಧರಿಹ  ಬಾಲರಿಗೆ ತಿಳಿವಣ್ಣು ಉಣಿಸಿ
ಸುಜ್ಞಾನದಮೃತದ ಧಾರೆಯನು ಸುರಿಸಿ
ಅಜ್ಞಾನ ತಮವನ್ನು ಬಾಳಿನಿಂ ಸರಿಸಿ
ಬಾಳ ಪಥವನು ತೋರಿ  ನಡೆಸಿ ಗುರುವರ್ಯ 

ಸುಖದಿ ಮೃದು ಭಾವಸಾಗರದ ಸೆಲೆಯಾಗಿ
ಕಷ್ಟದಲಿ ಮನಕೆ ಚೇತೋಹಾರಿಯಾಗಿ
ಮನಕೆ ದೃಢತೆಯನೀವ ತಾನಾಗಿ
ಸಲಹಿರಲಿ ನೀವೀವ ಸದ್ವಿದ್ಯೆ ಆರ್ಯ

ಚಿಗುರನ್ನು ಮರವಾಗಿಸುವ ಯತ್ನದಲ್ಲಿ
ಕುಡಿದೀಪವನು ತಾರೆಯಾಗಿಪುದರಲ್ಲಿ
ಕಿರಿ  ಬಾಳ್ಗೆ ಹಿರಿ ಅರ್ಥ ನೀಡುವುದರಲ್ಲಿ
ಬಾಳ ಸವೆಸಿಹಿರಿ ನೀವ್; ನಿಮ ಬಾಳೆ ಧನ್ಯ